ಕ್ಯುಆರ್ ಕೋಡ್ ( ) ಎಂಬುದರ ಸಂಕ್ಷಿಪ್ತ ರೂಪ. ಇದು ಒಂದು ವಿಧದ ಮ್ಯಾಟ್ರಿಕ್ಸ್ ಬಾರ್ ಕೋಡ್ (ಅಥವಾ ಎರಡು ಆಯಾಮದ ಬಾರ್‍ಕೋಡ್)ನ ಟ್ರೇಡ್ ಮಾರ್ಕ್ ಆಗಿದೆ. ಬಾರ್ ಕೋಡ್ ಎಂಬುದು ಆಪ್ಟಿಕಲ್ ಉಪಕರನಗಳ ಮೂಲಕ ಓದಬಹುದಾದಂತ ಒಂದು ಮಾಹಿತಿಪಟ್ಟಿ (ಲೇಬಲ್) ಆಗಿದ್ದು ಸಂಬಂಧಿಸಿದ ವಸ್ತುವಿನ ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ಕ್ಯುಆರ್ ಕೋಡ್ ನಾಲ್ಕು ಬಗೆಯ ಪ್ರಮಾಣೀಕೃತ ಸಂಕೇತೀಕರಣ ( )ಗಳನ್ನು ಬಳಸಿ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಅವೆಂದರೆ ನ್ಯೂಮೆರಿಕ್ (ಸಾಂಖ್ಯಿಕ), ಆಲ್ಫಾನ್ಯೂಮೆರಿಕ್ (ಅಕ್ಷರ ಮತ್ತು ಸಂಖ್ಯೆ ಒಳಗೊಂಡ), ಬೈಟ್/ ಬೈನರಿ ಮತ್ತು ಕಾಂಜಿ. ಕ್ಯುಆರ್ ಕೋಡಿನಲ್ಲಿ ಬಿಳಿಬಣ್ಣದ ಹಿನ್ನೆಲೆಯಲ್ಲಿ ಕಪ್ಪುಬಣ್ಣದ ಚೌಕಾಕಾರದ ಚಿಕ್ಕ ಚಿಕ್ಕ ರಚನೆಗಳು ಒಂದು ಚೌಕಾಕಾರದ ಕಟ್ಟಿನಲ್ಲಿ ವ್ಯವಸ್ಥೆಗೊಂಡಿರುತ್ತವೆ. ಇದನ್ನು ಸೂಕ್ತ ತಂತ್ರಾಂಶಗಳನ್ನು ಹೊಂದಿರುವ ಸ್ಮಾರ್ಟ್ ಫೋನ್, ಕ್ಯಾಮೆರಾದಂತಹ ಉಪಕರಣಗಳ ಮೂಲಕ ಓದಬಹುದು. ಅದರಲ್ಲಿ ಸಂಗ್ರಹಗೊಂಡ ಬೇಕಾದ ಮಾಹಿತಿಯನ್ನು ತೆಗೆದುಕೊಳ್ಳಬಹುದು. ಜಪಾನಿನಲ್ಲಿ ಮೊತ್ತಮೊದಲಬಾರಿಗೆ ಆಟೋಮೋಟಿವ್ ಕೈಗಾರಿಕೆಗೋಸ್ಕರ ಇದನ್ನು ತಯಾರಿಸಲಾಯಿತು. ಕಾಲಕ್ರಮೇಣ ಈ ಕ್ಯುಆರ್ ಕೋಡ್ ವ್ಯವಸ್ಥೆಯು ಆಟೊಮೊಟಿವ್ ಕೈಗಾರಿಕೆಯ ಹೊರಗೂ ಕೂಡ ಜನಪ್ರಿಯವಾಯಿತು. ಅದಕ್ಕೆ ಕಾರಣ ಇದರ ಸುಲಭ ಓದುವಿಕೆ ಮತ್ತು ಮಾಮೂಲಿ ಬಾರ್ ಕೋಡುಗಳಿಗಿಂತ ಒಳ್ಳೆಯರೀತಿಯಲ್ಲಿ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ. ಉತ್ಪನ್ನಗಳ ಜಾಡುಹಿಡಿಯುವಿಕೆ (ಟ್ರ್ಯಾಕಿಂಗ್), ಗುರುತುಹಿಡಿಯುವಿಕೆ, ಸಮಯದ ಲೆಕ್ಕಹಾಕುವಿಕೆ, ಕಡತಗಳ ನಿರ್ವಹಣೆ ಮತ್ತು ಸಾಮಾನ್ಯ ವ್ಯಾಪಾರದಲ್ಲಿ ಇವುಗಳ ಬಳಕೆಯಾಗುತ್ತದೆ ವಾಣಿಜ್ಯ ಉದ್ದೇಶಗಳಲ್ಲಿ ಜಾಡುಹಿಡಿಯಲು ಮತ್ತು ಅನುಕೂಲತೆಗೆ ಸಂಬಂಧಪಟ್ಟ ಉದ್ದೇಶಗಳಿಗಾಗಿ ಇದು ಬಳಕೆಯಲ್ಲಿದೆ. ಸ್ಮಾರ್ಟ್ ಫೋನುಗಳಲ್ಲಿ ಪಠ್ಯವನ್ನು ತೋರಿಸಲು, ಮೊಬೈಲ್ ಟ್ಯಾಗಿಂಗ್ ಮುಂತಾದ ಸೌಲಭ್ಯಗಳಲ್ಲಿ ಬಳಕೆಯಾಗುತ್ತದೆ. ಈ ಕ್ಯುಆರ್ ಕೋಡುಗಳನ್ನು ಸೃಷ್ಟಿಸಲು ಈ ಹಲವಾರು ತಂತ್ರಾಂಶಗಳು ಹಾಗೂ ಆನ್ ಲೈನ್ ಸಲಕರಣೆಗಳು ಇವೆ. ಇದು ಈಗ ಅತಿಹೆಚ್ಚು ಬಳಸಲ್ಪಡುತ್ತಿರುವ ಎರಡು ಆಯಾಮದ ಬಾರ್ ಕೋಡ್ ವಿಧಗಳಲ್ಲಿ ಒಂದಾಗಿದೆ. == ಇತಿಹಾಸ == ೧೯೯೪ರಲ್ಲಿ ಎಂಬ ಜಪಾನಿ ಕಂಪನಿಯು ಇದನ್ನು ಮೊದಲು ಆವಿಷ್ಕರಿಸಿತು. ವಾಹನಗಳ ತಯಾರಿಕೆಯಲ್ಲಿ ಅದರ ಜಾಡುಹಿಡಿಯುವುದು (ಟ್ರ್ಯಾಕಿಂಗ್) ಇದರ ಉದ್ದೇಶವಾಗಿತ್ತು.ಅತಿವೇಗವಾಗಿ ಭಾಗಗಳ ಸ್ಕ್ಯಾನಿಂಗ್ ಆಗಲು ಅನುವುಮಾಡಲು ಇದನ್ನು ತಯಾರಿಸಲಾಗಿತ್ತು.. ಈಗ ಕ್ಯು ಆರ್ ಕೋಡ್ ಗಳು ವಿಸ್ತಾರವಾಗಿ ಬಳಕೆಯಾಗುತ್ತಿವೆ. == ಪ್ರಮಾಣಗಳು (ಸ್ಟ್ಯಾಂಡರ್ಡ್ಸ್) == ಮಾಹಿತಿಯನ್ನು ಕ್ಯು ಆರ್ ಕೋಡ್ ನಂತೆ ಎನ್ಕೋಡ್ ಮಾಡಲು ಹಲವು ಪ್ರಮಾಣಗಳಿವೆ.: ಅಕ್ಟೋಬರ್ ೧೯೯೭ – ( ) ಜನವರಿ ೧೯೯೯ – 0510 ಜೂನ್ ೨೦೦೦ – / 18004:2000 – – – ( ) 1 2 . ೧ ಸೆಪ್ಟೆಂಬರ್ ೨೦೦೬ – / 18004:2006 – – 2005 ( ) 2005 , 2. 1 , . ೧ ಫೆಬ್ರವರಿ ೨೦೧೫ – / 18004:2015 – – 2005 . == ಬಳಕೆಗಳು == === ಮೊಬೈಲ್ ಕಾರ್ಯಾಚರಣ ವ್ಯವಸ್ಥೆಗಳು === === ಜಾಲಕೊಂಡಿಗಳು () === === ವಾಸ್ತವ ಅಂಗಡಿಗಳು ( ) === === ಕೋಡ್ ಪಾವತಿಗಳು === === ಜಾಲತಾಣದ ಲಾಗಿನ್ === === ವೈಫೈ ನೆಟ್ವರ್ಕ್ ಲಾಗಿನ್ === === ಎನ್ಕ್ರಿಪ್ಷನ್ () === === ವೀಡಿಯೊ ಗೇಮ್ಸ್ === ಈ ಕೆಳಗಿನವು ಕೆಲವು ಕ್ಯು ಆರ್ ಕೋಡ್ ನ ಮಾದರಿಗಳಾಗಿವೆ. == ಉಲ್ಲೇಖಗಳು ==